Advertisement 2

Saturday, 14 March 2015

VIBHOOTI FALLS

“ವಿಭೂತಿ ಫಾಲ್ಸ್”
ಅಚವೆ ಬಳಿಯ ದಟ್ಟವಾದ, ನಿತ್ಯಹರಿದ್ವರ್ಣದ ಕಾಡಿನ ಮಧ್ಯ 130 ಅಡಿ ಎತ್ತರಿಂದ ಮೂರು ಹಂತಇಲ್ಲಿನ ಕನ್ನಡ ಶಾಲೆಯ ಪಕ್ಕದ ಮಣ್ಣಿನ ರಸ್ತೆಯಲ್ಲಿ ಸುಮಾರು ಒಂದೂವರೆ ಕಿ.ಮೀ. ದೂರದ ತನಕ ವಾಹನದಲ್ಲಿ ಹೋಗಬಹುದು. ಅಲ್ಲಿಂದ ದಟ್ಟ ಕಾನನದಲ್ಲಿ ಕಾಲ್ನಡಿಗೆಯಲ್ಲಿ ಹೆಚ್ಚು ಕಡಿಮೆ 1 ಕಿ.ಮೀ. ಚಲಿಸಿದರೆ ವಿಭೂತಿ ಜಲಪಾತದ ರಮ್ಯತೆಯನ್ನು ಆಸ್ವಾದಿಸಬಹುದು. ಈಜು ಪ್ರಿಯರಿಗೆ ಇದು ಒಂದು ಸ್ವರ್ಗ. ಒಳ್ಳೆಯ ತಂಪಾದ ಶುದ್ಧ ನಿರು ನಿಮ್ಮನ್ನು ಕೈ ಬಿಸಿ ಕರೆಯುತ್ತದೆ. ಮತ್ತೆ ಇಲ್ಲಿನ ವಿಶೇಷ ಅಂದ್ರೆ ನೀವು ಜಲಪಾತದ ಹಿಂದೆ ಕೂಡ ಹೋಗಬಹುದು. ನಾಡಿನ ಸರ್ವಋತು ಜಲಪಾತಗಳಲ್ಲಿ ಇದೂ ಒಂದು. ಅಪರೂಪದ ಸಸ್ಯಗಳು ಈ ಪ್ರದೇಶವನ್ನು ವಿಶೇಷ ಜೀವವೈವಿಧ್ಯತೆಯ ತಾಣವನ್ನಾಗಿಸಿವೆ. ಈ ಕಾಡಿನ ಒಂದಂಚಿನಲ್ಲಿ ಕೇವಲ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುವ, ವಿನಾಶದ ಅಂಚಿನಲ್ಲಿರುವ ಅಶೋಕ ಮರಗಳಿವೆ. ಕಾಡಿನ ಒಡಲು ಹಲವು ಬಗೆಯ ಅಪರೂಪದ ಆರ್ಕಿಡ್ ಸಸ್ಯಗಳ, ಝರಿಸಸ್ಯಗಳ ಆಗರವಾಗಿದೆ.

ಗಳಲ್ಲಿ ಧುಮ್ಮಿಕ್ಕುವ ವಿಭೂತಿ ಜಲಪಾತ ಮನಮೋಹಕವಾಗಿದೆ. ಮೂಲ ಸೌಕರ್ಯದ ಕೊರತೆ ಈ ಜಲಪಾತಕ್ಕಿದೆ. ಅಂಕೋಲಾದ ಬಾಳೆಗುಳಿ ಕ್ರಾಸ್‌ನಿಂದ ಹುಬ್ಬಳ್ಳಿ ಮಾರ್ಗವಾಗಿ 23 ಕಿ.ಮೀ. ಚಲಿಸಿದರೆ ರಸ್ತೆಯ ಬಲಭಾಗದಲ್ಲಿ 'ಗೋಕರ್ಣ, ಕುಮಟಾಕ್ಕೆ ಹೋಗುವ ದಾರಿ' ಎಂಬ ನಾಮಫಲಕವಿದೆ. ಅಲ್ಲಿಂದ ಕಿರಿದಾದ ರಸ್ತೆಯಲ್ಲಿ ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ದಾಟಿ 3 ಕಿ.ಮೀ. ಮುನ್ನಡೆದು ಹೊಸಕಂಬಿ ಊರಿನ ಚೆಕ್‌ಪೋಸ್ಟ್‌ನಿಂದ ನೇರವಾಗಿ ಶಿರಸಿ ಕಡೆ ಪ್ರಯಾಣಿಸಿದರೆ 12 ಕಿ.ಮೀ. ದೂರದಲ್ಲಿ ಅಚವೆ ಊರು.
ಜಲಪಾತಕ್ಕೆ ಹೋಗುವ ಮಾರ್ಗ :
ಅಂಕೋಲಾ ದಿಂದ ಹೆಬ್ಬುಳ ಸೇತುವೆ ದಾಟಿ ಅಚವೆ ಅಲ್ಲಿಂದ ವಿಭೂತಿ ಫಾಲ್ಸ್
ಸಿರ್ಸಿಯಿಂದ ಯಾಣ ---> ಒಡ್ಡಿ ಘಾಟ--> ಅಚವೆ
ಕುಮಟದಿಂದ ಹಿರೇಗುತ್ತಿ --> ಮೊಗಟ---> ಅಚವೆ
ಹುಬ್ಬಳಿಯಿಂದ ಯಲ್ಲಾಪುರ -->ಗುಳ್ಳಾಪುರ -->ಹೆಬ್ಬುಳ --> ಅಚವೆ
ಅಂಕೋಲ --> ಮಾದನಗಿರಿ --> ಗುಂಡಬಾಳ --> ಹಿಲ್ಲೂರು ಮಾರ್ಗವಾಗಿಯೂ 34 ಕಿ.ಮೀ. ಸಾಗಿ ತಲುಪಬಹುದು.
ಹೋಗಲು ಅಕ್ಟೋಬರನಿಂದ ಫೆಬ್ರವರಿ ಒಳ್ಳೆಯ ಕಾಲ. ಹೋಗುವಾಗ ತಿಂಡಿ ಜೊತೆಗೆ ಇರಲಿ.