ಹದವದ ಒಂದು ಮನೆಯ ಅಂಗಳದಲ್ಲಿದ್ದ ಶಾಸನ. ವಿಜಯನಗರದ ದೊರೆ ಮೊದಲನೇ ದೇವರಾಯನ ಕಾಲದಲ್ಲಿ (1415) ಈ ಭಾಗದ ಪ್ರಾಂತ್ಯಾಧಿಕಾರಿಯಾದ ಗೋವೆಯ ಬಚ್ಚರಸ ಈ ಶಾಸನವನ್ನು ಬರೆಯಿಸಿದ. ಇಂದು ಶಾಸನವಿದ್ದ ಜಾಗದ ಮಾಲೀಕರು ಇದರ ಮುಂದೆ ಒಂದಿ ದೇವಿಯನ್ನು ಪ್ರತಿಷ್ಠಾಪಿಸಿ 'ನಾಗಚೌಡೇಶ್ವರಿ ಎಂದು ನಾಮಕರಣ ಮಾಡಿದ್ದಾರೆ. ಇದು ಒಂದು ಬಹುಡೊಡ್ಡ ದುರಂತ. ಇತಿಹಾಸ ವಿಕೃತಿಯ ಈ ದೃಶ್ಯ ಕಂಡು ತುಂಬ ನೋವಾಯಿತು.